ಅಭಿಪ್ರಾಯ / ಸಲಹೆಗಳು

ದೃಷ್ಟಿ | ಮೂಲೋದ್ದೇಶಗಳು | ಕಾರ್ಯಾಚರಣೆ

ಕರ್ನಾಟಕ ರಾಜ್ಯ ಸರ್ಕಾರವು ಭಾರತ ಸಂವಿಧಾನದತ್ತ/ನೀಡಿರುವ ಪರಮಾಧಿಕಾರದನ್ವಯ ರಾಜ್ಯದ ಆಡಳಿತವನ್ನು ಸುಸೂತ್ರವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಆಡಳಿತ ಪ್ರಕಾರ್ಯಗಳನ್ನು ಹಲವು ಇಲಾಖೆಗಳಲ್ಲಿ ಹಂಚಿಕೆ ಮಾಡಿರುತ್ತದೆ.  ಇದರಂತೆ ಶಿಕ್ಷಣ ಇಲಾಖೆಯಡಿಯಲ್ಲಿ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ) ಬರುವ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯೂ ಒಂದಾಗಿರುತ್ತದೆ.  ಇದರ ಹೆಸರೇ ತಿಳಿಸುವಂತೆ ಸರ್ಕಾರದ ಅಧಿನಿಯಮ / ನಿಯಮ/ಆದೇಶ/ಗೌಪ್ಯ ದಾಖಲೆಗಳು, ಇತ್ಯಾದಿಗಳನ್ನು ಮುದ್ರಿಸುವ ಮತ್ತು ಇತರೆ ಇಲಾಖೆಗಳ ಅವಶ್ಯವಾದ ನಮೂನೆ/ಕಾಗದ/ವಹಿಗಳು/ ಲೇಖನ ಸಾಮಗ್ರಿಗಳನ್ನು, ಇತ್ಯಾದಿಗಳನ್ನು ಸರಬರಾಜು ಮಾಡುವ ಹೊಣೆ ಹೊತ್ತಿರುತ್ತದೆ. ರಾಜಭವನ, ರಾಜ್ಯ ಉಚ್ಛ ನ್ಯಾಯಾಲಯ, ಸರ್ಕಾರದ ಸಚಿವಾಲಯಗಳು ಹಾಗೂ ಸರ್ಕಾರ ಮತ್ತು ಇತರೆ ಇಲಾಖೆಗಳು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಮಾಹಿತಿ ನೀಡುವ/ಪ್ರಚಾರ ಮಾಡುವ/ಮಾರ್ಗದರ್ಶನ ನೀಡುವ ಸಾಮಗ್ರಿ, ಇತ್ಯಾದಿಗಳನ್ನು ಪ್ರಕಟಿಸುವ/ಮಾರಾಟ ಮಾಡುವ ಜವಾಬ್ದಾರಿಯೂ ಇರುತ್ತದೆ.  ದಿನಾಂಕ 01ನೇ ಡಿಸೆಂಬರ್ 1971 ರಲ್ಲಿ ಹೊರತರಲಾದ ಸರ್ಕಾರಿ ಮುದ್ರಣಾಲಯಗಳ ಕೈಪಿಡಿಯಲ್ಲಿನ ಉಪಬಂಧಗಳನ್ವಯ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳನ್ನು ನಿಯಮನಗೊಳಿಸಲಾಗಿದೆ.

          ಇಲಾಖಾ ನಿರ್ದೇಶಕರು ರಾಜ್ಯಪತ್ರದ ಮುದ್ರಣ ಮತ್ತು ಪ್ರಕಟಣೆಗೆ ಸಮಬಂಧಿಸಿದಂತೆ ಪದನಿಮಿತ್ತ “ಸಂಕಲನಕಾರರೂ” ಆಗಿರುತ್ತಾರೆ.  ಇಲಾಖೆಯು ಮೂಲಭೂತವಾಗಿ ಒಂದು ಸೇವಾ ಇಲಾಖೆಯಾಗಿದ್ದು “ಯಾವುದೇ ಲಾಭ ಅಥವಾ ನಷ್ಟ ಇಲ್ಲದ” ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ.

          ಇಲಾಖೆಯು ಒಂದು ಹಂತದಲ್ಲಿ ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು ಇದು ತನ್ನ 14 ಅಧೀನ ಕಾರ್ಯಾಲಯಗಳನ್ನು ಒಳಗೊಂಡಂತೆ ರಾಜ್ಯದ ಉದ್ದಗಲಕ್ಕೂ ವ್ಯಾಪಿಸಿತ್ತು.  ಇಲಾಖೆಯು ನಿಯತಕಾಲಿಕವಾಗಿ ಮುದ್ರಣಕ್ಕೆ ಸಂಬಂಧಿಸಿದಂತೆ ನಿರ್ವಹಿಸಬೇಕಾದಂತಹ ಪ್ರಮುಖ ಕೆಲಸದ ಜವಾಬ್ದಾರಿಯನ್ನು ಈ ಮುಂದಿನAತೆ ಸಂಕ್ಷಿಪ್ತವಾಗಿ ನೀಡಲಾಗಿದೆ.

 • ಸರ್ಕಾರದ ಅಧಿಸೂಚನೆ ಸಂಖ್ಯೆ: ಇಪಿ 49 ಇಎಸ್‌ಡಬ್ಲ್ಯೂ 2020; ದಿನಾಂಕ: 08-12-2020ರಂತೆ ರಾಜ್ಯಪತ್ರವನ್ನು ಪ್ರತಿ ದಿನ ಪ್ರಕಟಿಸಲಾಗುತ್ತಿದೆ.
 • ಅವಶ್ಯವಿದ್ದಾಗಲೆಲ್ಲಾ ಸಂಧರ್ಭಾನುಸಾರ ವಿಶೇಷ ರಾಜ್ಯಪತ್ರದ ಮುದ್ರಣ ಮತ್ತು ಪ್ರಕಟಣೆ.
 • ಪ್ರತಿ ವರ್ಷ ಆಯಾ ಸಾಲಿನ ಪಠ್ಯ ಪುಸ್ತಕಗಳು ಮತ್ತು ಪಿ.ಯು.ಸಿ. ಉತ್ತರ ಪತ್ರಿಕೆಗಳ ಮುದ್ರಣ.
 • ರಾಜ್ಯದ ಆಯವ್ಯಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಸಮೀಕ್ಷೆ, ಆಯವ್ಯಯದ ದಸ್ತಾವೇಜುಗಳು ಮತ್ತು ಸಂಪುಟಗಳ ಮುದ್ರಣ.
 • ರಾಜ್ಯದ ಆಯವ್ಯಯದ ಮೇಲಿನ ಭಾಷಣದ ಪ್ರತಿಗಳ ಮುದ್ರಣ.
 • ಭಾರತ ಕಾನೂನು ವರದಿಗಳು ಆಂಗ್ಲ ಮತ್ತು ಕನ್ನಡ ಅವತರಣಿಕೆಯಲ್ಲಿ ಮುದ್ರಣ.
 • ಉಚಿತ ಸರಬರಾಜಾಗುವ ಪಠ್ಯ ಪುಸ್ತಕಗಳ ಭಾಗಶಃ ಮುದ್ರಣ.
 • ಹಲವಾರು ಇಲಾಖೆಗಳಿಗೆ ಸೇರಿದಂತೆ 100 ಕ್ಕೂ ಅಧಿಕ ವಿಧ ವಿಧವಾದ ನಮೂನೆಗಳ ಮುದ್ರಣ ಮತ್ತು ಸರಬರಾಜು.
 • ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ವಾರ್ಷಿಕ ವರದಿ ಸಿವಿಲ್ ಲಿಸ್ಟ್, ನಿರ್ವಾಹಣ ಮುಂಗಡ ವರದಿ, ಇತ್ಯಾದಿಗಳ ಮುದ್ರಣ.
 • ವಿಧಾನಸಭೆ, ವಿಧಾನ ಪರಿಷರತ್ತಿನ ಚರ್ಚಾ ಸಂಪುಟಗಳ ಮುದ್ರಣ ಮತ್ತು ಸರಬರಾಜು.
 • ಕಾಲ ಕಾಲಕ್ಕೆ ಜರಗುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಗಾತ್ರಗಳ ಲಕೋಟೆಗಳ ತಯಾರಿಕೆ, ನಮೂನೆಗಳ ಮುದ್ರಣ, ಚುನಾವಣಾಧಿಕಾರಿ ಗಳಿಗೆ ಸಂಬಂಧಿಸಿದಂತೆ ಕೈಪಿಡಿ, ಕರಪತ್ರ, ಮತಪತ್ರಗಳ ಮುದ್ರಣ.
 • ಮುದ್ರಣ ಕೆಲಸಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಇತರೆ ಇಲಾಖೆಗಳಿಗೆ ಸಲಹೆ-ಸೂಚನೆ ನೀಡುವುದು.
 • ಇಂದಿನ ಡಿಜಿಟಲ್ ತಂತ್ರಜ್ಞಾನದಲ್ಲಿ ರಾಜ್ಯಪತ್ರವನ್ನು ಪಿಡಿಎಫ್ ತಂತ್ರಾಂಶಕ್ಕೆ ಅಳವಡಿಸಲಾಗಿದೆ ಮತ್ತು ಪ್ರತಿ ವಾರ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತಿದೆ.
 • ಆಧುನಿಕ ಡಿಜಿಟಲ್ ಮುದ್ರಣಾಲಯವನ್ನು ವಿಕಾಸಸೌಧದಲ್ಲಿ ಸ್ಥಾಪಿಸಲಾಗಿದೆ.

ಇತ್ತೀಚಿನ ನವೀಕರಣ​ : 28-10-2022 04:38 PM ಅನುಮೋದಕರು: Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080