ಅಭಿಪ್ರಾಯ / ಸಲಹೆಗಳು

ಇಲಾಖೆಯ ಹಿನ್ನೆಲೆ

 

ಸರ್ಕಾರಿ ಮುದ್ರಣಾಲಯ, ಬೆಂಗಳೂರು ಭಾರತದ ಸ್ವತಂತ್ರ ಪೂರ್ವದಲ್ಲಿ ಅಂದರೆ, ಸುಮಾರು ಕ್ರಿ.ಶ. 1866 ರಲ್ಲಿ ಸ್ಥಾಪನೆಯಾಗಿರುವುದು ಇತಿಹಾಸದಿಂದ ತಿಳಿದುಬಂದಿರುತ್ತದೆ.  ಇದರ ನಿವೇಶನ/ಕಾರ್ಯಾಲಯವು ಸುಮಾರು ಕ್ರಿ.ಶ. 1871 ರ ಹೊತ್ತಿಗೆ ವಿಧಾನಸೌಧದ ಪಕ್ಕದಲ್ಲಿ ನಿರ್ಮಿಸಲಾಗಿತ್ತು (ಪ್ರಸ್ತುತ ವಿಕಾಸಸೌಧವನ್ನು ನಿರ್ಮಿಸಲು ಸ್ಥಳ ತೆರವುಗೊಳಿಸಲಾಯಿತು.) ಸದರಿ ಕಾರ್ಯಾಲಯದ ಕಟ್ಟಡವು ವಿಧಾನಸೌಧಕ್ಕಿಂತ ಮುಂಚಿನದ್ದಾಗಿರುತ್ತದೆ.  ಇಲ್ಲಿಂದಲೇ ಅಂದಿನ ಬ್ರಿಟೀಷ್ ಸರ್ಕಾರದ ಮುದ್ರಣ ಕಾರ್ಯವನ್ನು ನಿರ್ವಹಿಸಲಾಗುತ್ತಿತ್ತು.

          ಪ್ರಪ್ರಥಮವಾಗಿ ದಿನಾಂಕ 07-04-1866 ರಂದು ಮೈಸೂರು ರಾಜ್ಯಪತ್ರವನ್ನು ಮಿ|| ಎಲ್. ರಿಕೆಟ್ಸ್, ಆಯುಕ್ತರು, ಮೈಸೂರು, ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುತ್ತದೆ.  ಇತರ ಪ್ರಕಟಣೆ ಕೆಲಸಗಳ ವಿವರಗಳಲ್ಲಿ ಪ್ರಮುಖವಾದದ್ದು ಭಾರತೀಯ ಇತಿಹಾಸ ಪುಸ್ತಕ, ಇತ್ಯಾದಿಗಳಾಗಿರುತ್ತದೆ.   

          ಆಗ ಮುದ್ರಣ ಕಾರ್ಯಗಳನ್ನು ಐದು ಸಂಖ್ಯೆ ಕೈ ಅಚ್ಚು ಮುದ್ರಣ ಯಂತ್ರಗಳಿಂದ ಮತ್ತು 30 ಜನ ಸಿಬ್ಬಂದಿಗಳಿಂದ ನಿರ್ವಹಿಸಲಾಗುತ್ತಿತ್ತು.  ನಂತರ ಕ್ರಿ.ಶ. 1896 ರಲ್ಲಿ ಅನಿಲ ಮತ್ತು ಉಗಿಯಿಂದ ಚಾಲಿತ ಮುದ್ರಣ ಯಂತ್ರಗಳನ್ನು ಸ್ಥಾಪಿಸಲಾಗಿತ್ತು.  ಮುಂದುವರೆದು 1907 ರ ನಂತರವೇ ವಿದ್ಯುತ್ ಚಾಲಿತ ಮುದ್ರಣ ಯಂತ್ರಗಳನ್ನು ಪರಿಚಯಿಸಲಾಯಿತು.

          ನಂತರ ನಾವು ಸ್ವತಂತ್ರೋತ್ತರ ಅವಧಿಯಲ್ಲಿ ಭಾರತದ ಮೈಸೂರು ರಾಜ್ಯ (ಸಂಸ್ಥಾನ) ಮುದ್ರಣ ಕಾರ್ಯ/ಲೇಖನ ಸಾಮಗ್ರಿಗಳ ಸರಬರಾಜು/ಸರ್ಕಾರದ ಪ್ರಕಟಣೆಗಳನ್ನು ನಿರ್ವಹಿಸಲು ಮತ್ತು ಕಾಲದ ಅವಶ್ಯಕತೆ ಹಾಗೂ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಕಟ್ಟಡಗಳ ನಿರ್ಮಾಣ, ಇತ್ಯಾದಿಗಳನ್ನು ಕೈಗೊಳ್ಳಲಾಯಿತು. ಮತ್ತು ಅವಶ್ಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು.

          1956 ರಲ್ಲಿ ರಾಜ್ಯಗಳ ಪುನರ್ ಸಂಘಟಣೆಗಳಿಂದಾಗಿ ಕೂರ್ಗ್ ಸರ್ಕಾರದಿಂದ ಸಣ್ಣ ಮುದ್ರಣಾಲಯವನ್ನು, ಬಾಂಬೆ ಕರ್ನಾಟಕ ಪ್ರಾಂತ್ಯದ ಧಾರವಾಡದಲ್ಲಿ ಮುದ್ರಣಾಲಯವನ್ನು - 1962 ರಲ್ಲಿ ಮತ್ತು 1963 ರಲ್ಲಿ ಹೈದರಾಬಾದ್-ಕರ್ನಾಟಕ ಪ್ರಾಂತ್ಯದಲ್ಲಿ ಗುಲಬರ್ಗಾ ಮುದ್ರಣಾಲಯವನ್ನು ಸ್ಥಾಪಿಸಿ/ಪ್ರಾರಂಭಿಸಲಾಯಿತು.  1888 ರಲ್ಲೇ ಸ್ತಾಪಿಸಲಾಗಿದ್ದ ಮೈಸೂರು ಮುದ್ರಣಾಲಯವನ್ನು 1964 ರಲ್ಲಿ ಈ ಇಲಾಖೆಯ ನಿಯಂತ್ರಣಕ್ಕೆ ಒಳಪಡಿಸಲಾಯಿತು.  ಮತ್ತು ಪ್ರತ್ಯೇಕವಾಗಿ ಪಠ್ಯ ಪುಸ್ತಕಗಳ ಮುದ್ರಣ ಕೆಲಸಕ್ಕೆ ಮೀಸಲಿರಿಸಲಾಗಿದೆ.  ಇದರಂತೆ 1962 ರಲ್ಲಿ ಮತಪತ್ರಗಳನ್ನು ಮುದ್ರಿಸುವ ಸಲುವಾಗಿ ದೊಡ್ಡದಾದ ಕೆಲಸದ ವಿಭಾಗವನ್ನು ನಿರ್ಮಿಸಲಾಯಿತು.

ಇತ್ತೀಚಿನ ನವೀಕರಣ​ : 24-07-2020 06:00 PM ಅನುಮೋದಕರು: Director


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080